ಇದು ಮಧ್ಯಂತರ ಬಜೆಟ್ ಅಲ್ಲ, ಚುನಾವಣಾ ಪ್ರಚಾರದ ಭಾಷಣ: ಚಿದಂಬರಂ
ಇದು ಮಧ್ಯಂತರ ಬಜೆಟ್ ಅಲ್ಲ. ಪೂರ್ಣ ಪ್ರಮಾಣದ ಬಜೆಟ್ ಮತ್ತು ಲೋಕಸಭೆ ಚುನಾವಣಾ ಪ್ರಚಾರದ ಭಾಷಣ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ....
ನವದೆಹಲಿ: ಇದು ಮಧ್ಯಂತರ ಬಜೆಟ್ ಅಲ್ಲ. ಪೂರ್ಣ ಪ್ರಮಾಣದ ಬಜೆಟ್ ಮತ್ತು ಲೋಕಸಭೆ ಚುನಾವಣಾ ಪ್ರಚಾರದ ಭಾಷಣ ಎಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಶುಕ್ರವಾರ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ ಅವರು, ಬಜೆಟ್ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಖಾತೆಗಳಲ್ಲಿ ಮತ ಅಲ್ಲ, ಮತಗಳಿಗಾಗಿ ಖಾತೆ' ಎಂದು ಲೇವಡಿ ಮಾಡಿದ್ದಾರೆ.
ಮಧ್ಯಂತರ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಅತಿ ಉದ್ದದ ಮಧ್ಯಂತ ಬಜೆಟ್ ಭಾಷಣ ಮಾಡುವ ಮೂಲಕ ನಮ್ಮ ತಾಳ್ಮೆ ಪರೀಕ್ಷೆ ಮಾಡಿದರು. ಇದು ಮಧ್ಯಂತರ ಬಜೆಟ್ ಅಲ್ಲ. ಪೂರ್ಣ ಪ್ರಮಾಣದ ಬಜೆಟ್ ಮತ್ತು ಚುನಾವಣಾ ಪ್ರಚಾರದ ಭಾಷಣ ಎಂದರು.
ಇದಕ್ಕು ಮುನ್ನ, ಮೋದಿ ಸರ್ಕಾರದ ಕೊನೆ ಬಜೆಟ್ನಲ್ಲಿ ಕಾಂಗ್ರೆಸ್ ಐಡಿಯಾವನ್ನೇ ಕಾಪಿ ಮಾಡಲಾಗಿದೆ. ದೇಶದ ಸಂಪನ್ಮೂಲಗಳ ಮೊದಲ ಹಕ್ಕುದಾರ ರೈತ ಎಂಬ ಕಾಂಗ್ರೆಸ್ ಘೋಷಣೆಯನ್ನು ಹಂಗಾಮಿ ಹಣಕಾಸು ಸಚಿವರು ಕಾಪಿ ಮಾಡಿದ್ದಕ್ಕೆ ಧನ್ಯವಾದ ಎಂದು ಚಿದಂಬರಂ ಟ್ವೀಟ್ ಮಾಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.